Story about hana kinthaguna mukya

Answers 1

Explanation:

) “ಹಣಕ್ಕಿಂತ ಗುಣ ಮುಖ್ಯ”

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

‘ ದುಡೇ ದೊಡ್ಡ ಮ ‘ ಹಣವಿಲ್ಲದವನ ಬಾಳು ಹೆಣದ ಹಾಗೆ ‘ , ‘ ಕಾಸಿದ್ರೆ ಕೈಲಾಸ ‘ , ‘ ಮೊದಲಾದ ಹೇಳಿಕೆಗಳು ಹಣದ ಗುಣವನ್ನು ಸಾರಿಹೇಳುತ್ತವೆ . ‘ ಹಣವೇ , ನಿನ್ನಯ ಗುಣವೆಷ್ಟು ವರ್ಣಿಸಲಿ ‘ ಎಂದು ದಾಸರು ಹಾಡಿದ್ದಾರೆ .

‘ ಸರ್ವ ಗುಣಾಃ ಕಾಂಚನ ಮಾಶ್ರಯಂತಿ ‘ – ಎಲ್ಲ ಗುಣಗಳೂ ಚಿನ್ನವನೇ ಎಂದರೆ ಹಣವನೇ ಆಶ್ರಯಿಸುತ್ತವೆ ಎಂದು ಸುಭಾಷಿತವು ಹೇಳುತ್ತದೆ . ಹಣವುಳ್ಳವರ ಅವಗುಣಗಳೆಲ್ಲವೂ ಮರೆಯಾಗುತ್ತವೆ . ಹಣವುಳ್ಳ ವ್ಯಕ್ತಿಗೌರವಕ್ಕೆ ಪಾತ್ರನಾಗುತ್ತಾನೆ .

ಹಣವಿದ್ದರೆ ಸಕಲ ಸುಖಸೌಲಭ್ಯಗಳನ್ನು ಪಡೆಯಬಹುದೆಂಬ ನಂಬಿಕೆಯೂ ಇದೆ . ಹೀಗೆ ಹಣದ ಗುಣವನ್ನು ವರ್ಣಿಸಲು ಸಾಕಷ್ಟು ಕಾರಣಗಳಿವೆ . ಹಣವಿರುವವರಿಗೆ ಸ್ನೇಹಿತರಿರುತ್ತಾರೆ . ಅವರಿಗೆ ಸಮೀಪ ಬಂಧುಗಳಿರುತ್ತಾರೆ .

ಪುಪಂಚದಲ್ಲಿ ಅವರೇ ನಿಜವಾದ ಮನುಷ್ಯರೆನಿಸುತ್ತಾರೆ . ಅವರು ಗೌರವದಿಂದ ಜೀವಿಸುತ್ತಾರೆ . ಹೀಗೆ ಹಣಕ್ಕೆ ವಿಶೇಷವಾದ ಶಕ್ತಿ ಇದೆ . ಆದರೆ ಈ ಗಾದೆಯಲ್ಲಿ ಹಣಕ್ಕಿಂತ ಗುಣವೇ ಶೇ ಹೇಳಲಾಗಿದೆ . ಹಣವು ಹತ್ತು ನಿನ್ನಿಂದ ಮತ್ತೆ ನನ್ನಿಂದ ಎಂದು ಪೇರಿಸುವುದಂತೆ .

ಹತ್ತು ರೂಪಾಯಿಗಳನ ಮತ್ತೆ ಹತ್ತು ರೂಪಾಯಿಗಳನ್ನು ಉಳಿಸಿ ಅದರೊಂದಿಗೆ ಕೂಡಿಡುವ ಮನಸ್ಸಾಗುವುದಂತೆ . ಹಾಗೆ ಮನಸ್ಸು ಹುಟ್ಟಿದಾಗ ಹೊಟ್ಟೆ ಬಟ್ಟೆಗಳನ್ನು ಕಟ್ಟಿ , ಜಿಪುಣತನದಿಂದ ಹಣವನ್ನು ಉಳಿಸಲು ತೊಡಗುತ್ತಾನೆ .

ಆಗ ಅವನಿಗೆ ಹಣವೇ ಮುಖ್ಯವಾಗಿ ತೋರುತ್ತೆ. ಯಾರೂ ಬೇಕೆನಿಸುವುದಿಲ್ಲ . ಹಣ ಸೇರಿದಂತೆ ಅಹಂಕಾರ ತಲೆಗೇರುತ್ತದೆ . ಹಣವಿಲ್ಲದವರನ್ನು ಬಡವರನ್ನು ತಾತ್ಸಾರದಿಂದ ನೋಡುತ್ತಾನೆ. ತನ್ನನ್ನು ಹೊಗಳುವವರು ಮಾತ್ರ ಅವನಿಗೆ ಗೆಳೆಯರು , ಆಪ್ತರು ಎನಿಸುತ್ತಾರೆ .

ನೂರುಳ್ಳವನು ಸಾವಿರವನ್ನೂ ಸಾವಿರವುಳ್ಳವನು ಲಕ್ಷವನ್ನೂ ಲಕ್ಷಾಧಿಪನು ರಾಜ್ಯವನ್ನೂ ರಾಜ್ಯವುಳ್ಳವನು ಸ್ವರ್ಗವನ್ನೂ ಒಂದಾದ ಮೇಲೆ ಒಂದರಂತೆ ಬಯಸುತ್ತಲೇ ಇರುತ್ತಾನೆ. ಹಣಕ್ಕೆ ದಾನ, ಭೋಗ , ನಾಶವೆಂಬ ಮೂರು ಗತಿಗಳಿವೆ .

ಯಾರು ದಾನ ಮಾಡದೇ , ಅನುಭವಿಸದೇ ಇರುವನೋ , ಅವನ ಹಣಕ್ಕೆ ಮೂರನೆಯ ಗತಿ ಎಂದರೆ ನಾಶವೇ ದಾರಿಯಾಗುತ್ತದೆ . ಹಣವಿದ್ದಾಗ ದೊರೆಯುತ್ತಿದ್ದ ಗೌರವಾದರಗಳು ಹಣ ದೋಂದಿಗೇ ಹೋಗುತ್ತವೆ. ಗುಣವಂತರಲ್ಲಿ ಹಣವಿದ್ದರೆ ಅದು ಪರೋಪಕಾರಕ್ಕಾಗಿಯೇ ವಿನಾ ಸ್ವಾರ್ಥಕ್ಕಾಗಿಯಲ್ಲ.

ಅವರಿಗೆ ‘ ದಾನಾಯ ಲಕ್ಷ್ಮೀ- ದಾನ ಮಾಡಲೆಂದೇ ಸಂಪತ್ತು . ಯಾರಿಗೂ ತಿಳಿಯದಂತೆ ದಾನಮಾಡುವುದು, ಉಪಕಾರಮಾಡುವುದು , ಕ್ಷಮಾ ಗುಣ , ಬಡವರಿಗೆ ಕೇಳುವುದಕ್ಕೆ ಮುಂಚೆಯೇ ನೀಡುವುದು , ಒಳ್ಳೆಯದನೇ ಯೋಚಿಸುವುದು ಗುಣವಂತರ ಲಕ್ಷಣಗಳಾಗಿವೆ .

ದುರ್ಜನರಲ್ಲಿ ಹಣ ಸೇರಿದಾಗ ದುರ್ಗುಣಗಳೇ ಬೆಳೆಯುತ್ತವೆ . ಸಜ್ಜನರಲ್ಲಿ ಗುಣವಂತರಲ್ಲಿರುವ ಹಣ ಸದ್ವಿನಿಯೋಗ ವಾಗುತ್ತದೆ . ಹಣದಿಂದಾಗಿ ಅವರ ಗುಣಗಳು ಅವಗುಣಗಳಾಗುವುದಿಲ್ಲ. ಆದ್ದರಿಂದ ಹಣಕ್ಕಿಂತ ಗುಣವೇ ಮೇಲು ಎನಿಸುತ್ತದೆ ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.

2) “ಹಾಸಿಗೆ ಇದ್ದಷ್ಟು ಕಾಲು ಚಾಚು “

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ‘ಮಿತಿಯನ್ನು ಅರಿತು ಬಾಳು ‘ ಎಂಬ ಉಪದೇಶವನ್ನು ನೀಡುತ್ತದೆ . ” ಆಸೆಯೇ ದುಃಖಕ್ಕೆ ಕಾರಣ ‘ ಎನ್ನುವ ಮಾತೂ ‘ ಆಸೆಯೇ ಪ್ರಗತಿಗೆ ಮೂಲ ‘ ಎನ್ನುವ ಮಾತೂ ನಾವು ಕೇಳಿದ್ದೇವೆ .

ಇವೆರಡು ಪರಸ್ಪರ ವಿರುದ್ಧವಾಗಿ ಕಂಡರೂ , ಈ ಎರಡನ್ನೂ ಹೊಂದಿಸಿ , “ ಆಸೆಯಿರಬೇಕು , ಆಸೆಗೆ ಮಿತಿಯಿರಬೇಕು ” ಎಂದು ಹೇಳಬಹುದು .

ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಸಾಮರ್ಥ್ಯ, ಸೌಕರ್ಯಗಳನ್ನು ಗಮನಿಸಬೇಕು . ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಥವಾ ಹಾಸಿಗೆಯನ್ನು ಮೀರಿ ಕಾಲು ಚಾಚಿದರೆ ಅಪಾಯ , ತೊಂದರೆ ತಪ್ಪಿದ್ದಲ್ಲ .

ಒಬ್ಬ ಬಡವ ತನ್ನ ಹೊಲ , ಗದ್ದೆ , ಮನೆ , ಎಲ್ಲವನ್ನೂ ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಮದುವೆ ಸಿದ್ಧನಿದ್ದ . ಅವನ ಹಿತೈಷಿಯೊಬ್ಬನು ” ಹೀಗೆಲ್ಲಾ ಮಾಡಬೇಡ , ಇದ್ದ ಬದ್ದುದನ್ನೆಲ್ಲಾ ಮಾರಿ , ಮದುವೆ ಮಾಡಬೇಡ ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೆ ಖರ್ಚುಮಾಡು , ಶಕ್ತಿಮೀರಿ ಖರ್ಚುಬೇಡ ; ಹಾಸಿಗೆ ಇದ್ದಷ್ಟು ಕಾಲು ಚಾಚು ‘ ಎಂದು ಹಿತನುಡಿದನು .

ಹಾಗೆಯೇ ನಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಿಲ್ಲ ಆದ್ದರಿಂದ ಯಾರೇ ಆಗಲಿ ಅವರ ಶಕ್ತಿ ಎಷ್ಟಿದೆಯೋ ಅಷ್ಟು ಮಾತ್ರ ಮಾಡಬೇಕು ಎಂಬುದು ಈ ಗಾದೆಮಾತಿನ ಸಾರಾಂಶವಾಗಿದೆ ಈ ಮಾತು ಪ್ರತಿಯೊಬ್ಬರಿಗು ಅನ್ವಯಿಸುತ್ತದೆ.

3) “ತುಂಬಿದ ಕೊಡ ತುಳುಕುವುದಿಲ್ಲ”

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

ತುಂಬಿದ ಕೊಡ ತುಳುಕುವುದಿಲ್ಲ ಇದು ಒಂದು ಅರ್ಥಪೂರ್ಣವಾದ ನೀತಿಬೋಧಕವಾದ ಗಾದೆಯಾಗಿದೆ . ಈ ಗಾದೆಯ ಮಾತಿನ ಅರ್ಥ ಎಷ್ಟು ಸತ್ಯವೋ ಇದರಿಂದ ಹೊರಡುವ ಲಕ್ಷಾರ್ಥವೂ ಅಷ್ಟೇ ಮನೋಜ್ಞವಾಗಿದೆ .

ಒಂದು ಕೊಡದಲ್ಲಿ ತುಂಬ ನೀರನ್ನು ತುಂಬಿ ಅನಂತರ ಅದನ್ನು ತೆಗೆದುಕೊಂಡು ಹೋದರೆ ನೀರಿನ ಸ್ವಲ್ಪ ಭಾಗವೂ ಅಲುಗಾಟದಿಂದ ತುಳುಕುವುದಿಲ್ಲ – ಚೆಲ್ಲುವುದಿಲ್ಲ . ಇದರ ಬದಲು ಕೊಡ ಪೂರ್ತಿ ತುಂಬುವ ಮುನ್ನ ಕೊಡವನ್ನು ಒಯ್ದರೆ ಅಲುಗಾಟದಿಂದ ಕಲುಕಿ ನೀರು ತುಳುಕುತ್ತದೆ .

ಈ ಅಲುಗಾಟ ದಿಂದ – ತುಳುಕಾಟದಿಂದ ಹೊರಡುವ ಶಬ್ದವೇ ಟೊಳ್ಳಾಗಿದ್ದು , ನೀರು ತುಂಬಿಲ್ಲ ‘ ಸೂಚಿಸುತ್ತಿರುತ್ತದೆ . ಹಾಗೆಯೇ ನಿಜವಾದ ವಿದ್ಯಾವಂತನಾದವನು , ನೀತಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡ ಪ್ರಾಜ್ಞವಂತನು ಮಾತನಾಡುವುದಿಲ್ಲ , ‘ ಕಚ್ಚುವ ನಾಯಿ ಬೊಗಳುವುದಿಲ್ಲ ‘ ಎಂಬಂತೆ ತುಂಬಾ ವಿದ್ಯಾವಂತ ಗಂಭೀರವಾಗಿರುತ್ತಾರೆ .

ಹೀಗೆಂದಾಕ್ಷಣ ಗಂಬೀರವಾಗಿರುವವರೆಲ್ಲ ವಿದ್ಯಾವಂತರೆಂದು ತೀರ್ಮಾನಿಸಬೇಕಾಗಿಲ್ಲ, ಆದರೆ ಅಲ್ಪವಿದ್ಯಾವಂತನಾದವನು ಮಾತ್ರ ತನಗೆ ಎಲ್ಲವೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳಲು ಯತ್ನಿಸುತ್ತಾ ಹೆಚ್ಚು ಹೆಚ್ಚು ಅನಾವಶ್ಯಕವಾಗಿ ಮಾತನಾಡಿ ತನ್ನ ಟೊಳ್ಳುತನವನ್ನು ಪ್ರದರ್ಷಿಸಿಕೊಳ್ಳುತ್ತಾನೆ. ಹೀಗೆ ಬಾಳುವುದು ಸರಿಯಲ್ಲ ಎನ್ನುವುದು ಏ ಗಾದೆಯ ಸಾರಾಂಶವಾಗಿದೆ.

4) “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”

ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯು ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ. ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಾಗಿರುವುದು.

ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿಧಮತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ, ಮೆಣಸಿನ ಕಾಯಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವದಿಲ್ಲ.

ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಮುಂತಾಗಿ ನಾನಾ ರೀತಿಯ .

If you know the answer add it here!

Can't find the answer?

Log in with Google

or

Forgot your password?

I don't have an account, and I want to Register

Choose a language and a region
How much to ban the user?
1 hour 1 day 100 years